Notice :
Karnataka Janata Party

Welcome to KJP

ಜೀವನ ಎನ್ನುವುದು ಅನುಭವಗಳ ಅಗಣಿತ ಗಣಿ. ಅದು ನಮ್ಮ ಮುಂದಿರಿಸುವ ಸವಾಲುಗಳನ್ನು ಸ್ವೀಕರಿಸಿ, ಗುರಿಗಳತ್ತ ಮುನ್ನಡೆಯುವುದೇ ನಮ್ಮ ಧ್ಯೇಯವಾಗಬೇಕು. ಗುರಿಗಳತ್ತ ಗಮನವಿದ್ದರೆ ದೇವನೆಂಬ ಸದ್ಗುರುವಿನ ಮಾರ್ಗದರ್ಶನ ಇದ್ದೇ ಇರುತ್ತದೆ ಎಂಬುದು ನನ್ನ ದೃಢ ನಂಬಿಕೆ.

ಕರ್ನಾಟಕದ ರಾಜಕೀಯದಲ್ಲಿ ನಾಲ್ಕು ದಶಕಗಳ ಹಿಂದೆ ನಾನು ಹೆಜ್ಜೆ ಇಡತೊಡಗಿದಾಗ ಒಂದು ದಿನ ನಾನು ರಾಜ್ಯದ ಮುಖ್ಯಮಂತ್ರಿ ಗದ್ದುಗೆಯತ್ತ ನಡೆಯುವೆನೆಂಬ ಕನಸು ಕಂಡಿರಲಿಲ್ಲ. ನನಗೆ ವಹಿಸಿದ ಕೆಲಸಗಳು ಮತ್ತು ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ಮಾತ್ರ ನನ್ನ ಕಣ್ಣ ಮುಂದಿತ್ತು. ನನ್ನ ರಾಜಕೀಯ ಜೀವನದ ಉದ್ದಕ್ಕೂ ಜನರ ಹಿತಾಸಕ್ತಿಗಳ ರಕ್ಷಣೆಯೇ ನನ್ನ ಆಧ್ಯತೆಯಾಗಿತ್ತು.

ಈಗ ನನ್ನ ಜೀವನ ಮತ್ತು ರಾಜಕೀಯ ಎರಡೂ ಕವಲು ದಾರಿಯಲ್ಲಿ ನಿಂತಿದೆ. ನಾನೊಂದು ಹೊಸ ನಿರ್ಧಾರ ಕೈಗೊಳ್ಳಲೇಬೇಕಾದ ಗಳಿಗೆ ಬಂದಿದೆ. ಆದರೆ ಮುಸುಕುವ ಮಬ್ಬಿನಲ್ಲಿ ಜನಹಿತ ರಕ್ಷಣೆಯ ಸಂಕಲ್ಪದ ಬೆಳಕು ನನ್ನ ಕೈಹಿಡಿದು ನಡೆಸಲಿದೆ ಎಂಬ ನಂಬಿಕೆ ನನಗಿದೆ.

Read More

Subscribe Newsletter


 

Your Feedback

Please share your Idea and opinion here.

Click Here to Submit

Contact Us

#11, 12th Main, 17th Cross, Malleshwaram,
Bengaluru - 560 055

080-2356 5650
info@kjpkarnataka.org